ಕೈಲಾಸ ಯಾತ್ರೆಯ ಮಾಡಿದೆ ಎಂದು ಏಕೆ ನೀನು ಮೆರೆವೆ
ಮೆರೆಯುವುದನ್ನ ಬಿಟ್ಟರೆ ನೀನು ಆ ಕೈಲಾಸವ ಸೇರುವೆ
೧
ತಿಮ್ಮಪ್ಪನಿಗೆ ಕೋಟಿ ದಾನ ಮಾಡಿದೆಯೆಂದು ಏಕೆ ಸೊಕ್ಕು
ಹಸಿದೊಂದು ಹೊಟ್ಟೆಗೆ ಅನ್ನದಾನ ಮಾಡಿ ನೀನು ವೈಕುಂಠ ಹೊಕ್ಕು
ಕೈಲಾಸ ಯಾತ್ರೆಯ...
೨
ಹತ್ತಾರು ಜನರನು ಕೊಂದು ನೀನು ಆಗಬೇಕೆನ್ನುವೆ ಹುತಾತ್ಮ
ಕರ್ಮಯೋಗಿಯಾಗಿ ನೀನು ಕಾಯಕದಿಂದಾಗು ಪರಮಾತ್ಮ
ಕೈಲಾಸ ಯಾತ್ರೆಯ...
No comments:
Post a Comment