Saturday, December 15, 2018

ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು - ಜೀವಮೌಲ್ಯವನ್ನು ಕುರಿತು ಬರೆದ ಗೀತೆ

ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು
ಹಾಯಾದ ಅಡ್ಡಹಾದಿಯ ಹಿಡಿಯದಿರು 
ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು

1...............
ಕೊಟ್ಟ ಕೆಲಸದ ಸೂಕ್ಷ್ಮತೆಯ ಆಳವನಳಿ
ಸಿಕ್ಕ ಹೊಣೆಯ ಮೇರೆತ್ತರವನೇರು
ನಡುತರೆಯ ಕೆಸರಿನಲಿ ಮುಳುಗಾಡದಿರು

ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು

2...............
ನಿನ್ನನುಭವಗಳ ಬೇರು ಮುನ್ನುಗ್ಗಿ ಹರಡಲಿ
ನಿನ್ನರಿವಿನರೆಂಬೆಗಳ್ ಹಿಗ್ಗಿ ಚಾಚಲಿ
ಸುಖಾಲಸ್ಯದ್ ಹೊಂಡದಲಿ ಮಂಡೂಕವಾಗದಿರು

ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು

3.................
ಎಡಗಡೆಯ ನೋಟವನು ಕಡೆಗಣಿಸದಿರು
ಬಲಬದಿಯ ಅಭಿಮತವ ಎಸೆದಾಡದಿರು
ಅಸಹನೆಯ ಕತ್ತಲೊಳು ಜಡವಾಗದಿರು

ಕರ್ಮಯೋಗಿಯಾಗು, ಕರ್ಮಯೋಗಿಯಾಗು, ಕರ್ಮಯೋಗಿಯಾಗು
ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು

ಅಣ್ಣ ನಾನು ತೊಡಗಿದಾಗ - ಗಣಪತಿಗೆ ಪ್ರಾರ್ಥನೆ

ಅಣ್ಣ ನಾನು ತೊಡಗಿದಾಗ
ನೀನು ಪ್ರಾರಾಂಭಿಸು
ನಾನು ಬಲಗಾಲೆತ್ತಿದಾಗ
ಎಡವ ನೀ ಅವಲಂಬಿಸು 

1...
ನಾನು ಜೀವಕೆ ಜನ್ಮ ಕೊಟ್ಟೆ
ನೀನು ಜನ್ಮವ ಚೇತರಿಸು
ನಾನು ಬಲಗಾಲೆತ್ತಿದಾಗ
ಎಡವ ನೀ ಅವಲಂಬಿಸು 

2...
ಅಣ್ಣ ನೀನು ತಮ್ಮನೊಂದಿಗೆ
ಮನದೊಳಗೆ ದಯಮಾಡಿಸು
ನೀವಿಬ್ಬರು ಜೊತೆಯಲ್ಲಿದ್ದರೆ
ಎಲ್ಲರಿಗು ಸಂತಸು

3...
ಆದಿ ನೀನಾಗಿರುವೆ ಅಣ್ಣ
ಆತನು ಅನಂತನೂ
ಕರ್ಮಯೋಗಿಯ ಗೀತೆಗಳಲ್ಲಿ
ಭಕ್ತಿ ಭಾವನೆ ಸ್ಫೂರ್ತಿಸು

ಕ್ಷೇತ್ರಕ್ಕೆ ಬರಬೇಡಿರಯ್ಯ - ತೀರ್ಥಕ್ಷೇತ್ರಗಳಲ್ಲಿ ಹರಕೆ ಹೊತ್ತುವ ಪದ್ಧತಿಯ ಕುರಿತು ಗೀತೆ

ಕ್ಷೇತ್ರಕ್ಕೆ ಬರಬೇಡಿರಯ್ಯ
ಸ್ವಾಮಿಯೊಡನೆ ವ್ಯವಹಾರವಿದ್ದರೆ
ಕ್ಷೇತ್ರಕ್ಕೆ ಬರಬೇಡಿರಯ್ಯ
ಮರವೇ ಬರಡಾದಾಗ
ಕುಕ್ಕೆ ಇದ್ದರೂ ಫಲವೇನು?

1...
ಕೆರೆಯ ನೀರನ್ನೇ ಕೆರೆಗೆ ಚೆಲ್ಲಿ
ಸಾಧಿಸಿದ್ದಾದರೂ ಎನು?
ಹರಕೆ ಹೊತ್ತು ಕರವ ಮುಗಿದು
ಸ್ವಾಮಿಗೆ ನೀನು ಕೊಟ್ಟಿದ್ದೇನು?

2...
ಹೋಮ ಯಾಗ ಪೂಜೆ ಭಜನೆ
ನಾಮ ಸ್ಮರಣ ಅರ್ಚನೆ
ಇವೆಲ್ಲ ಧರ್ಮವೆಂದು
ತಿಳಿದು ಅರಿತಿದ್ದೇನು?

3...
ಅರ್ಹ ಯೋಗ್ಯ ನಾನು ಎಂದು
ಏಕೆ ನಿನಗೆ ಭ್ರಾಂತಿಯು
ಕರ್ಮಯೋಗಿಯ ಮಾತುಕೇಳು
ಕರ್ಮಕ್ಕಿಂತ ಮಿಗಿಲೇನು?