ಜಯ ಜಯಾ ರಾಮಕೃಷ್ಣಾಯ
ಜಯ ಜ್ಞಾನಸುಧ ಪ್ರದಾಯ
ಅಜ್ಞಾನಂಧಕಾರ ಹರಾಯ
ಜಯ ಹೇ ಪರಮಹಂಸ
೧
ಗದಾಧರ ನಾಮಾಂಕಿತ
ಕಾಳಿಕಾ ವರಬಲಾನ್ವಿತ
ವಿವೇಕಾನಂದ ಪರಿಪಾಲಿತ
ಶಾರದಾಮಾತ ಗುರುಕೃತ
೨
ಅದ್ವೈತಾಮೃತ ಶಿಖಾಮಣಿ
ಗೃಹಸ್ಥಾವಧೂತ ಶಿರೋಮಣಿ
ಸಾಧು ಸಜ್ಜನ ಮನೋನ್ಮಣಿ
ಕರ್ಮಯೋಗಿ ಜನ ಕಣ್ಮಣಿ