ಏನು ಹಾಡಲಿ ಪಾಪಿಗಳ ಸೌಭಾಗ್ಯ,
ಪುಣ್ಯವಂತರಿಗಿಂತ ಪಾಪಿಯಾಗುವುದೇ ಲೇಸು (೨)
೧
ಪುಣ್ಯವಂತನಾದ ಸುಧಾಮನು ನಿನ್ನ್ ಮನೆಗೆ
ನಡೆದು ಬಂದನು (೨)
ನೀ ಲಂಕೆಯವರೆಗೆ ನಡೆದು ಹೋದ ರಾವಣನ
ಸೌಭಾಗ್ಯ ಏನು ಹೇಳಲಿ?
೨
ಪುಣ್ಯವಂತಳಾದ ಯಶೋಧೆಯು ನಿನ್ನನ್ನು
ಮಡಿಲಲ್ಲಿ ಮುದ್ದಾಡಿದಳು (೨)
ನೀನೆ ಎತ್ತಿ ಮಡಿಲಲ್ಲಿ ಮಲಗಿಸಿಕೊಂಡ
ಹಿರಣ್ಯನ ಸೌಭಾಗ್ಯ ಏನು ಹೇಳಲಿ?
೩
ಪುಣ್ಯವಂತನಾದ ಪಾರ್ಥನು ವಿಶ್ವರೂಪವನ್ನು
ರಣರಂಗದಲಿ ಕಂಡ (೨)
ಸಭೆಯೊಳಗೇ ಅದನು ಕಂಡ ಕೌರವೇಶ್ವರನ
ಸೌಭಾಗ್ಯ ಏನು ಹೇಳಲಿ?
(೪)
ಪುಣ್ಯವಂತರಾದ ಭಕ್ತರಿಗೆ ಮೋಕ್ಷವನ್ ನೀ
ಅನುಗ್ರಹಿಸುವೆ (೨)
ಕಾಯಕದಲಿ ಕೈಲಾಸ ಕಾಣುವ ಕರ್ಮಯೋಗಿಯ
ಸೌಭಾಗ್ಯ ಏನು ಹೇಳಲಿ
Edited to fit Roopaka taala (ರೂಪಕ ತಾಳಕ್ಕೆ ಅನುಬದ್ಧವಾದ ಸಾಹಿತ್ಯ)
ಏನು ಹೇಳಲಿ ನಾನು ಪಾಪಿಗಳ ಸೌಭಾಗ್ಯ
ಪುಣ್ಯವಂತರಿಗಿಂತ ಪಾಪಿಯಾಗುವುದೇ ಲೇಸು
ಪುಣ್ಯಾತ್ಮ ಸುಧಾಮ
ತಾನೇ ನಡೆದು ಬಂದ
ನೀನೇ ನಡೆದು ಹೋದ
ಲಂಕೇಶ್ವರನೇ ಧನ್ಯ
ಪುಣ್ಯ ಮಾತೆ ಯಶೋದೆ
ನಿನ್ನ ಮಡಿಲಲ್ಲೆತ್ತಿದಳು
ನಿನ್ನ ಮಡಿಲಲಿ ಮಲುಗಿದ
ಆ ಹಿರಣ್ಯನೇ ಬಹು ಧನ್ಯ
ಪಾರ್ಥನಿಗೆ ರಣದಲ್ಲಿ
ದಿವ್ಯದರ್ಶನವಾಯ್ತು
ಸಭೆಯೊಳಗೆ ಅದ ಕಂಡ
ಕೌರವೇಶ್ವರನೇ ಧನ್ಯ
ಪುಣ್ಯವಂತರಿಗೆ ನೀನು
ಮೋಕ್ಷವನು ನೀಡುವೆಯೋ
ಕಾಯಕವನೇ ಪೂಜಿಸುವ
ಕರ್ಮಯೋಗಿಗಳೇ ಧನ್ಯ